ಪಪಿಸ್ -
ದಕ್ಷಿಣ ಆಕಾಶದ, ಹೆಚ್ಚುಕಡಿಮೆ ಪೂರ್ತಿಯಾಗಿ ಆಕಾಶಗಂಗೆಯ ಹಾದಿಯಲ್ಲಿ ವ್ಯಾಪಿಸಿರುವ, ಆರ್ಗೊನಕ್ಷತ್ರ ಪುಂಜದ ಒಂದು ಉಪನಕ್ಷತ್ರಪುಂಜ. ಉಳಿದವು ವೇಲಾ ಮತ್ತು ಕರೀನ. ಆರ್ಗೊ ಪುಂಜ, ಅತ್ಯಧಿಕ ಉಷ್ಣತೆಯುಳ್ಳ ಎರಡು ನಕ್ಷತ್ರಗಳ ಪೈಕಿ ಪಪಿಸ್ ಒಂದು ( ವೇಲೆ ಇನ್ನೊಂದು. ಗ್ರೀಕ್ ಪುರಾಣದ ಪ್ರಕಾರ ಚಿನ್ನದ ತುಪ್ಪಟವನ್ನು ಪಡೆಯಲು ಗ್ರೀಕ್ ವೀರ ಆರ್ಗೊನಾಟ್ ಎಂಬಾತ ಜೀಸನ್ ಎಂಬ ಮತ್ತೊಬ್ಬ ವೀರನೊಡನೆ ಆರ್ಗೊ ಎಂಬ ಹೆಸರಿನ ನೌಕೆಯಲ್ಲಿ ಕುಳಿತು ಪ್ರಯಾಣಮಾಡಿದ ಎಂದಿದೆ. ಪಪಿಸ್ ಉಪಪುಂಜ ಆ ಹಡಗಿನ ಹಿಂಭಾಗವನ್ನೂ (ದಿ ಪೂಪ್) ವೇಲಾ ಉಪಪುಂಜ ಹಡಗಿನ ಹಾಯಿಯನ್ನೂ (ದಿ ಸೇಯ್ಲ್) ಕರೀನ ಉಪಪುಂಜ ಹಡಗಿನ ಅಡಿಗಟ್ಟನ್ನೂ (ದಿಕೀಲ್) ಪ್ರತಿನಿಧಿಸುತ್ತವೆ ಎಂದು ಹೇಳಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ